ಮುಚ್ಚಿ

ಹೇಮಗಿರಿ ಫಾಲ್ಸ್

ನಿರ್ದೇಶನ
ವರ್ಗ ಅಡ್ವೆಂಚರ್, ನೈಸರ್ಗಿಕ / ಮನೋಹರ ಸೌಂದರ್ಯ

ತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ ಎಂಟು ಕಿ.ಮೀ.ಪೂರ್ವಕ್ಕಿರುವ ಇದು ಹೇಮಾವತಿಯಿಂದ ಸುತ್ತುವರಿದ ಗಿರಿಯಾಗಿರುವುದರಿಂದ ಹೇಮಗಿರಿ ಎಂದೇ ಚಿರಪರಿಚಿತವಾಗಿದೆ. ಇಲ್ಲಿಯ ಗುಡ್ಡದ ಮೇಲಿರುವ ವೆಂಕಟರಮಣ ಸ್ವಾಮಿ ಗುಡಿಯು ಆಧುನಿಕ ಕಾಲದಾಗಿದ್ದು, ವೈಕುಂಠವಾಸಿ ವಿಷ್ಣುವು ಬದಲಾವಣೆಗಾಗಿ ಇಲ್ಲಿಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದ ಪುಣ್ಯಕ್ಷೇತ್ರ ಇದೆಂಬ ಐತಿಹ್ಯವಿದೆ.

ಹೇಮಾವತಿ ನದಿಗೆ ಇಲ್ಲಿ 415 ಮೀ. ಉದ್ದದ ಅಣೆಕಟ್ಟನ್ನು ಕ್ರಿ.ಶ.1880 ರಲ್ಲಿ ನಿರ್ಮಿಸಲಾಗಿದ್ದು, ಪ್ರೇಕ್ಷಣೀಯವಾಗಿದೆ. ಅಲ್ಲದೇ ಇಲ್ಲಿ ಸುಮಾರು 310 ಎಕರೆಯಷ್ಟು ವಿಶಾಲವಾದ ದ್ವೀಪವನ್ನು (ಹೊಸಪಟ್ಟಣ) ಹೇಮಾವತಿಯು ಸೃಷ್ಟಿಸಿದ್ದು, ಅಲ್ಲಿ ಪ್ರಾಚೀನ ಕಾಲದ ಕೋಟೆಯ ಅವಶೇಷಗಳಿದ್ದು, ಮರಗಿಡಗಳಿಂದ ಆವೃತ್ತವಾಗಿರುವ ಈ ಕಾನನ ರಂಗನತಿಟ್ಟು, ಕೊಕ್ಕರೆ ಬೆಳ್ಳೂರುಗಳಿಗೆ ಸರಿಸಾಟಿಯಾದ ಪಕ್ಷಿಧಾಮವಾಗಿದೆ. ಜನಜಂಗುಳಿಯಿAದ ದೂರವಿರುವ, ಪರಿಸರ ಮಾಲಿನ್ಯಕ್ಕೆ ಹೊರತಾಗಿರುವ ಇಲ್ಲಿಗೆ ಬಿಲ್ ಸ್ಪಾರ್ಕ್, ಲೈಟ್ ಫ್ಲೆಮಿಂಗ್, ಹೇಬಿಸ್. ಕ್ರಿಸ್ಟರ್, ಕಾಜಾಣ, ಬೆಳವ, ಬೆಳಕ್ಕಿ ಮುಂತಾದ ಪಕ್ಷಿಗಳು ಬಹು ದೂರದ ಸೈಬೀರಿಯಾ, ಬರ್ಮ, ಆಫ್ಘಾನಿಸ್ತಾನ, ಆಸ್ಟಿçಯಾ, ಸಿಲೋನ್, ದೇಶಗಳಿಂದ ಹಾಗೂ ಉತ್ತರ ಭಾರತದ ಗುಜರಾತ್, ರಾಜಸ್ಥಾನಗಳಿಂದಲೂ ವಲಸೆ ಬರುತ್ತವೆ.