ಮುಚ್ಚಿ

ಪ್ರವಾಸೋದ್ಯಮ

ಸಕ್ಕರೆ ನಾಡು ಮಂಡ್ಯ.

ಜಿಲ್ಲಾ ಕೇಂದ್ರವಾಗಿರುವ ಇದು ರಾಜಧಾನಿ ಬೆಂಗಳೂರಿನಿಂದ 96 ಕಿ.ಮೀ. ದಕ್ಷಿಣಕ್ಕೆ, ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಪ್ರಮುಖ ಪಟ್ಟಣ. ನೆರೆಯ ಹೊಸಬೂದನೂರಿನ ಅನಂತಪದ್ಮನಾಭ ಗುಡಿಯಲ್ಲಿರುವ, ಹೊಯ್ಸಳ ಮುಮ್ಮಡಿ ನರಸಿಂಹನ ಕಾಲಕ್ಕೆ ಸೇರಿದ ಕ್ರಿ.ಶ.1276ರ ಶಾಸನದಲ್ಲಿ ಇದು `ಅನಾದಿ ಅಗ್ರಹಾರ ಮಂಡೆಯ’’ಎಂದೇ ದಾಖಲಿಸಲ್ಪಟ್ಟಿದ್ದರೆ, ವಿಜಯನಗರದ ಅರಸ ಕೃಷ್ಣದೇವರಾಯನ ಕಾಲದ ಕ್ರಿ.ಶ.1516ರ ಮಂಡ್ಯ ತಾಮ್ರ ಶಾಸನದಲ್ಲಿ `ಅಗ್ರಹಾರ ಮಂಠೇಯ’’ಹಾಗೂ `ಚಿಕ್ಕಮಂಟೆಯ’ ಗಳ ಪ್ರಸ್ತಾಪವಿದೆ. ಈ ಶಾಸನಗಳಿಂದ ಮಂಡ್ಯ ಸ್ಥಳನಾಮದ ಮೂಲ ರೂಪವು `ಮಂಡೆಯ, ಮಂಠೆಯ’’ ಆಗಿದ್ದು, ಶ್ರೀವೈಷ್ಣವ ಬ್ರಾಹ್ಮಣರಿಗೆ ನೀಡಲ್ಪಟ್ಟಿದ್ದ ದತ್ತಿ ಅಗ್ರಹಾರವಾಗಿದ್ದು, ಪ್ರಮುಖ ವಿದ್ಯಾಕೇಂದ್ರವೂ ಆಗಿದ್ದ ಅಂಶ ವೇದ್ಯವಾಗುತ್ತದೆ. ಇದರ ಪ್ರಾಚೀನತೆಯನ್ನು ಪೌರಾಣಿಕವಾಗಿ ಕೃತಯುಗದಷ್ಟು ಹಿಂದಕ್ಕೆ ಗುರುತಿಸಲಾಗುತ್ತದೆ. ಅದರಂತೆ ಕೃತಯುಗದಲ್ಲಿ ದಟ್ಟವಾದ ಅರಣ್ಯದಿಂದೊಡಗೂಡಿದ್ದ ಈ ಪ್ರದೇಶದಲ್ಲಿ ತಪಸ್ಸು ಮಾಡುತ್ತಿದ್ದ ಮಾಂಡವ್ಯ ಋಷಿಗಳು, ಪ್ರಾಣಿಗಳಿಗೂ ವೇದೋಪದೇಶ ನೀಡುತ್ತಿದ್ದುದರಿಂದ ಇದಕ್ಕೆ ವೇದಾರಣ್ಯ ಎಂಬ ಹೆಸರಿದ್ದು, ಮಾಂಡವ್ಯ ಮುನಿಗಳಿಂದಾಗಿ ಮುಂದೆ ಅದೇ ‘ಮಂಡ್ಯ’’ ಆಯಿತೆಂದೂ ಇಲ್ಲಿಯ ಜನಾರ್ದನನ ಪ್ರತಿಷ್ಠಾಪನೆ ಅವರದೆಂದೂ ಹೇಳಲಾಗುತ್ತದೆ.

Tourism

ಸಮಿತಿ:

ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು,

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ,

ಮಂಡ್ಯ-571401.

ಸಂಪರ್ಕಿಸಿ:

ಉಪ ನಿರ್ದೇಶಕರ ಕಚೇರಿ,

ಪ್ರವಾಸೋದ್ಯಮ ಇಲಾಖೆ,

ಮಂಡ್ಯ-571401.

ದೂರವಾಣಿ ಸಂಖ್ಯೆ: 08232-23877

ಇ-ಮೇಲ್ : ddmandyatourism@gmail.com