ಜಿಲ್ಲಾಧಿಕಾರಿಯವರು ಜಿಲ್ಲೆಯ ಉಸ್ತುವಾರಿ ಅಧಿಕಾರಿಯಗಿರುತ್ತಾರೆ. ಉಪ ವಿಭಾಗಾಧಿಕಾರಿಯು ಉಪವಿಭಾಗದ ಉಸ್ತುವಾರಿ ವಹಿಸುತ್ತಾರೆ. ತಾಲ್ಲೂಕಿನ ಪ್ರಧಾನ ಕಚೇರಿಗೆ ತಹಸೀಲ್ದಾರ್ ಉಸ್ತುವಾರಿ ಅಧಿಕಾರಿಯಗಿರುತ್ತಾರೆ. ಪ್ರತಿಯೊಂದು ಹೋಬಳಿಗೆ ಕಂದಾಯ ನಿರೀಕ್ಷಕರನ್ನು ನೇಮಿಸಲಾಗಿರುತ್ತದೆ ಮತ್ತು ಗ್ರಾಮ ಅಥವಾ ಗ್ರಾಮದ ಗುಂಪಿನಲ್ಲಿ ಗ್ರಾಮ ಲೆಕ್ಕಿಗರು ಉಸ್ತುವಾರಿ ವಹಿಸಿರುತ್ತಾರೆ.