ಮುಚ್ಚಿ

ಅಂತರವಳ್ಳಿ

ನಿರ್ದೇಶನ
ವರ್ಗ ಅಡ್ವೆಂಚರ್, ಇತರೆ, ಐತಿಹಾಸಿಕ

ತಾಲೂಕು ಕೇಂದ್ರ ಮಳವಳ್ಳಿಯಿಂದ 15 ಕಿ.ಮೀ. ಈಶಾನ್ಯಕ್ಕಿದ್ದು, ಪ್ರಾಚೀನ ಶಾಸನಗಳಲ್ಲಿ `ಅಂತರವಳ್ಳಿ’, `ಅನ್ತçವಳ್ಳಿ’ , `ಅನ್ನದಾನಪಳ್ಳಿ’ ಎಂದೆಲ್ಲಾ ಉಲ್ಲೇಖಿತಗೊಂಡಿದ್ದು, ಈವರೆಗೆ ಸುಮಾರು 12-13ನೇ ಶತಮಾನಕ್ಕೆ ಸೇರಿದ ತಮಿಳಿನ ಒಂದು ಹಾಗೂ ಕನ್ನಡದ ಎರಡು ಶಾಸನಗಳು ಇಲ್ಲಿಂದ ವರದಿಯಾಗಿವೆ. ಊರ ಬಳಿಯಿರುವ ಸಿದ್ಧೇಶ್ವರ ಬೆಟ್ಟದ ಮೇಲಕ್ಕೇರಲು ಉದ್ದಕ್ಕೂ ಕಬ್ಬಿಣದ ಸಲಾಕೆಗಳನ್ನು ಒದಗಿಸಲಾಗಿದೆ. ಬೆಟ್ಟದಲ್ಲಿ ಹಲವಾರು ಗವಿಗಳಿವೆ. ಗುರುವಾರ, ಭಾನುವಾರಗಳಂದು ಮಾತ್ರ ಪೂಜೆ ನಡೆಯುವ ಇಲ್ಲಿಯ ಶಂಭುಲಿAಗನ ಗುಡಿಯ ಗರ್ಭಗೃಹದಲ್ಲಿ ಮರುಳು ಸಿದ್ಧೇಶ್ವರ ಹಾಗೂ ರಸಸಿದ್ಧೇಶ್ವರರ ವಿಗ್ರಹಗಳಿದ್ದು ಗುಡ್ಡದಲ್ಲಿ ಪವಿತ್ರ ಮಜ್ಜಿಗೆ ಕೊಳವಿದ್ದು, ಬುಡದಲ್ಲಿ ಕುಂಟ ಭೈರವನ ಗುಡಿಯಿದೆ. ಹರಕೆ ಹೊತ್ತ ಭಕ್ತರು ಈ ದೇವರ ಉತ್ಸವಮೂರ್ತಿಗಳನ್ನು ತಮ್ಮ ಊರುಗಳಿಗೆ ಕೊಂಡೊಯ್ದು ಮೆರವಣಿಗೆ – ಉತ್ಸವಗಳನ್ನು ನಡೆಸುತ್ತಾರೆ.