ಮುಚ್ಚಿ

ಚಿಕ್ಕಮುತ್ತತ್ತಿ

ನಿರ್ದೇಶನ
ವರ್ಗ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಶಿವನ ಸಮುದ್ರದ ಸಮೀಪದಲ್ಲಿರುವ ಚಿಕ್ಕ ಮುತ್ತತ್ತಿಯಲ್ಲಿರುವ ಮುತ್ತೆತ್ತರಾಯನ ಗುಡಿಯು ವಿಸ್ತಾರವಾಗಿದ್ದು, ಗರ್ಭಗೃಹದಲ್ಲಿ ಹನುಮಂತನನ್ನು ಕಡೆದಿರುವ ಶಿಲಾಸ್ತಂಭವು (ಗರುಡ ಸ್ತಂಭ) ಆರಾಧಿಸಲ್ಪಡುತ್ತದೆ. ಸೀತಾದೇವಿಯ ಕಳೆದು ಹೋದ ಚಿಕ್ಕ ಮೂಗುತಿಯನ್ನು ಹನುಮಂತನು ಇಲ್ಲಿ ಎತ್ತಿಕೊಟ್ಟನೆಂಬ ಪೌರಾಣಿಕ ಕಥೆ ರೂಢಿಯಲ್ಲಿದ್ದು, ಇಲ್ಲಿ ಪ್ರತೀ ವರ್ಷ ನಡೆಯುವ ಜಾತ್ರೆಯಲ್ಲಿ ಹುಲಿವಾಹನೋತ್ಸವ, ದಾಸಯ್ಯಗಳಿಗೆ ಬಾಯಿಮಣೆ ಇಕ್ಕಿಸುವಂತಹ ವಿಶಿಷ್ಟ ಆಚರಣೆಗಳು ನಡೆಯುತ್ತವೆ. ಪ್ರತಿ ವರ್ಷ ಲಕ್ಷಾಂತರ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಮಂಡ್ಯ ಜಿಲ್ಲೆಯ ಈ ಪ್ರವಾಸಿ ತಾಣಗಳನ್ನು ಸಂದರ್ಶಿಸುತ್ತಿದ್ದಾರೆ. ಈ ಪ್ರವಾಸಿ ತಾಣದ ನೆರೆ ಹೊರೆಯಲ್ಲಿರುವ ಪ್ರೇಕ್ಷಣೀಯ ಕೇಂದ್ರಗಳಾದ ಪಕ್ಕದ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ತಲಕಾಡು, ಸೋಮನಾಥಪುರ, ಮುಡುಕುತೊರೆ ಇತ್ಯಾದಿ ಸ್ಥಳಗಳು ರಾಜ್ಯದ ಪ್ರವಾಸೋದ್ಯಮ ಶ್ರೀಮಂತಿಕೆಯನ್ನು ಹೆಚ್ಚಿಸಿರುತ್ತವೆ.