ಆದಿಚುಂಚನಗಿರಿ
ನಿರ್ದೇಶನತಾಲೂಕು ಕೇಂದ್ರ ನಾಗಮಂಗಲದಿAದ 20 ಕಿ.ಮೀ. ಉತ್ತರಕ್ಕೆ ಚುಂಚನಹಳ್ಳಿಯಿAದ ಪೂರ್ವಕ್ಕಾದಂತಿರುವ ಶ್ರೀಕ್ಷೇತ್ರ.ಒಕ್ಕಲಿಗರ ಎರಡು ಗುರುಪೀಠ ಮಠಗಳಲ್ಲಿ ಒಂದಾದ ಇಲ್ಲಿಯ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠವು ಪ್ರಸಿದ್ಧವಾಗಿದೆ.ರಾಮಾಯಣ ಕಾಲದಷ್ಟು ಪ್ರಾಚೀನ ಪೌರಾಣಿಕ ಹಿನ್ನೆಲೆಯನ್ನುಳ್ಳ ಇದು, ಪ್ರಾಚೀನ ಶಾಸನಗಳಲ್ಲಿ ಚುಂಚನಕೋಟೆ (ಕ್ರಿ.ಶ.1205), ಚುಂಚನಹಳ್ಳಿ (ಕ್ರಿ.ಶ.1484), ಆದಿಚುಂಚನಗಿರಿ (ಕ್ರಿ.ಶ.1896) ಎಂದೆಲ್ಲಾ ಉಲ್ಲೇಖಿತಗೊಂಡಿದ್ದು, ಹೊಯ್ಸಳರ ಕಾಲದಿಂದಲೂ ಕಲ್ಕುಣಿ ನಾಡೊಳಗಿತ್ತು. ಈವರೆಗೆ ಒಂಬತ್ತು (ಚುಂಚನಹಳ್ಳಿಯಲ್ಲಿ ನಾಲ್ಕು ಹಾಗೂ ಬೆಟ್ಟದ ಮೇಲೆ ಐದು) ಶಾಸನಗಳು ಇಲ್ಲಿಂದ ವರದಿಯಾಗಿವೆ. ಚುಂಚನೆAಬುವನಿAದ ನಿರ್ಮಿಸಲ್ಪಟ್ಟ, ಇಲ್ಲವೇ `ಚುಂಚಲಗಿಡ’ ಹೇರಳವಾಗಿದ್ದರಿಂದ ಊರಿಗೆ ಚುಂಚನಹಳ್ಳಿ ಎಂದೂ, ಬಳಿಯ ಬೆಟ್ಟಕ್ಕೆ `ಚುಂಚನಗಿರಿ’ ಎಂದೂ ಹೆಸರು ಬಂದಿತೆAಬ ಅಭಿಪ್ರಾಯ ಇದೆ.
ಚುಂಚ-ಕAಚ ರಾಕ್ಷಸ ಸೋದರರನ್ನು ಶಿವನು ಸಂಹಾರ ಮಾಡಿದ ಸ್ಥಳ ಇದೆಂಬ ಐತಿಹ್ಯವಿದ್ದು, ದ್ರಾವಿಡ ಶೈಲಿಯಲ್ಲಿ ಕಾಲಭೈರವನ ವಿಶಾಲವಾದ ಆಕರ್ಷಕ ದೇವಾಲಯವಿದೆ. ಶ್ರೀಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಇದ್ದು, ಉಳಿದುಕೊಳ್ಳಲು ಸುಸಜ್ಜಿತ ವಸತಿ ಸೌಕರ್ಯವಿದೆ.ಫಾಲ್ಗುಣ ಶುದ್ಧ ಹುಣ್ಣಿಮೆಯಂದು ಬೆಳಗಿನ ಜಾವ ಮೂರು ಗಂಟೆಗೆ ಜರುಗುವ ರಥೋತ್ಸವದಲ್ಲಿ ಪಾಲ್ಗೊಳ್ಳಲು ಅಸಂಖ್ಯಾತ ಭಕ್ತರು ಸೇರುತ್ತಾರೆ. ಹೂಪಲ್ಲಕ್ಕಿಯಲ್ಲಿ ಕುಳಿತ ಮಠದ ಸ್ವಾಮಿಗಳ ಮುಂದಾಳತ್ವದಲ್ಲಿ ತೇರೆಳೆಯುವ ದೃಶ್ಯ ಭಕ್ತರನ್ನು ಭಾವ ಪರವಶರನ್ನಾಗಿಸುತ್ತದೆ.