ನಿಮಿಷಾಂಭ ದೇವಾಲಯ
ನಿರ್ದೇಶನವರ್ಗ ಐತಿಹಾಸಿಕ, ಧಾರ್ಮಿಕ
ಗಂಜಾಮಿನಲ್ಲಿ ಉತ್ತರ ಕಾವೇರಿಯ ದಂಡೆ ಮೇಲಿರುವ ನಿಮಿಷಾಂಬ-ಮೌಕ್ತೀಶ್ವರ ದೇವಾಲಯವು, ಮುಕ್ತಕಮುನಿಯ ಕೋರಿಕೆಯಂತೆ ಆದಿಶಕ್ತಿಯು ನಿಮಿಷನಿಮಿಷಕ್ಕೂ ರೂಪು ಬದಲಿಸಿಕೊಳ್ಳುತ್ತಿದ್ದ ರಕ್ಕಸ ಜಾನುಮಂಡಲನನ್ನು ಸಂಹರಿಸಲು ನಿಮಿಷನಿಮಿಷಕ್ಕೂ ಭಿನ್ನರೂಪು ತಾಳಿದ್ದರಿಂದ ನಿಮಿಷಾಂಬ ಎಂಬ ನಾಮ ಪಡೆದಳೆಂಬ ಪೌರಾಣಿಕ ಹಿನ್ನೆಲೆಯಲ್ಲಿ ನಿರ್ಮಾಣಗೊಂಡಿದ್ದು, ನದಿ ತೀರದಲ್ಲಿರುವುದರಿಂದ ರಮಣೀಯವಾಗಿದ್ದು, ದೋಣಿ ವಿಹಾರಕ್ಕೆ ಹರಿಗೋಲಿನ ಸೌಲಭ್ಯವಿದೆ. ಪ್ರತೀ ಮಂಗಳವಾರ, ಶುಕ್ರವಾರಗಳಂದು ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.