ಮುಚ್ಚಿ

ಮುತ್ತತ್ತಿಯ ಶ್ರೀ ಮುತ್ತುರಾಯನ ಸ್ವಾಮಿ ದೇವಾಲಯ

ನಿರ್ದೇಶನ
ವರ್ಗ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಜಿಲ್ಲೆಯ ರಮ್ಯ ವನಪ್ರಾಂತ ಎಂದೇ ಪ್ರಸಿದ್ಧವಾದ ಬಸವನಬೆಟ್ಟ ಕಾಯ್ದಿಟ್ಟ ಅರಣ್ಯ ಪ್ರದೇಶದ ನಡುವೆ ಕಾವೇರಿ ನದಿಯ ಎಡದಂಡೆಯ ಮೇಲಿದ್ದು, ತಾಲೂಕು ಕೇಂದ್ರ ಮಳವಳ್ಳಿಯಿಂದ 45 ಕಿ.ಮೀ. ಆಗ್ನೇಯಕ್ಕಿದೆ. ರಾಮಾಯಣ ಕಾಲದಷ್ಟು ಪ್ರಾಚೀನ ಪೌರಾಣಿಕ ಪರಂಪರೆಯುಳ್ಳ ಇಲ್ಲಿಗೆ ಶ್ರೀರಾಮ, ಲಕ್ಷö್ಮಣ, ಸೀತೆ ಹಾಗೂ ಹನುಮಂತಾದಿಗಳು ಆಯೋಧ್ಯೆಗೆ ಹಿಂತಿರುಗುವ ಮಾರ್ಗದಲ್ಲಿ ಬಂದು ತಂಗಿದ್ದರAತೆ. ಆಗ ಕಾವೇರಿಯಲ್ಲಿ ಸ್ನಾನ ಮಾಡುತ್ತಿದ್ದ ಸೀತೆಯ ಮುತ್ತಿನ ಮೂಗುತಿ ಜಾರಿದಾಗ, ಸೀತೆಯ ಕೋರಿಕೆಯಂತೆ ಹನುಮಂತನು ತನ್ನ ಬಾಲವನ್ನು ಬೆಳೆಸಿ ಇಳಿ ಬಿಟ್ಟು, ಕಾವೇರಿ ಜಲವನ್ನು ಕಡೆದು ಮೂಗುತಿಯನ್ನು ಮೇಲೆತ್ತಿ ಕೊಟ್ಟನಂತೆ. ಅದರಿಂದಾಗಿ ಈ ಸ್ಥಳಕ್ಕೆ ಮುತ್ತತ್ತಿ ಎಂದೂ, ಕ್ಷೇತ್ರದೇವತೆಯಾಗಿ ಅಲ್ಲೇ ನೆಲೆಸುವ ಹನುಮಂತನಿಗೆ ಮುತ್ತೆತ್ತರಾಯನೆಂಬ ಅಭಿದಾನವು ಬರಲೆಂದೂ ಹನುಮಂತನಿಗೆ ಸೀತೆ ವಚನ ಕೊಟ್ಟಳೆಂಬ ಜನಪದ ನಂಬಿಕೆ ಇದೆ. ಶ್ರಾವಣ ಮಾಸದಲ್ಲಿ ನಡೆಯುವ ಮುತ್ತೆತ್ತರಾಯನ ಜಾತ್ರೆಯಲ್ಲಿ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಸೇರುತ್ತಾರೆ.