ಆರತಿ ಉಕ್ಕಡ
ನಿರ್ದೇಶನವರ್ಗ ಧಾರ್ಮಿಕ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪುಣ್ಯ ಕ್ಷೇತ್ರಗಳಲ್ಲಿ ಆರತಿ ಉಕ್ಕಡವೂ ಸಹ ಒಂದು. ಶ್ರೀರಂಗಪಟ್ಟಣದಿಂದ 10 ಕಿಲೋ ಮೀಟರ್ ದೂರದಲ್ಲಿ ಪ್ರಶಾಂತ ಹಚ್ಚ ಹಸುರಿನ ನಡುವೆ ನೆಲೆಸಿರುವಳು ತಾಯಿ ಶ್ರೀ ಅಹಲ್ಯಾದೇವಿ. ಎಲ್ಲಾ ವರ್ಗದವರಿಂದ ಪೂಜಿಸಲ್ಪಡುವ ಉಕ್ಕಡದ ಮಾರಮ್ಮನ ದರ್ಶನಕ್ಕಾಗಿ ಇಂದು ಲಕ್ಷಾಂತರ ಜನರು ಮುಂಜಾನೆಯಿಂದ ಸಂಜೆಯವರೆಗೂ ಕಾಯುವುದು ಈ ದೇವಸ್ಥಾನದ ವಿಶೇಷ. ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಂದು ಸಹಸ್ರಾರು ಪ್ರವಾಸಿಗರು ಆಗಮಿಸುತ್ತಾರೆ.