ಮುಚ್ಚಿ

ಕೊಕ್ಕರೆ ಬೆಳ್ಳೂರು

ನಿರ್ದೇಶನ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ತಾಲೂಕು ಕೇಂದ್ರ ಮದ್ದೂರಿನಿಂದ 18 ಕಿ.ಮೀ. ವಾಯವ್ಯಕ್ಕಿದ್ದು, ಪ್ರಾಚೀನ ಶಾಸನಗಳಲ್ಲಿ `ಬೆಲ್ಲೂರು, ಬೆಳೂರು, ಚಿಕ್ಕಬೆಳೂರು’ ಎಂದೆಲ್ಲಾ ಉಲ್ಲೇಖಿತಗೊಂಡಿದ್ದು, ಹಿಂದೆ ಕಳಲೆ ನಾಡಿಗೆ ಸೇರಿತ್ತು.ಆದರೂ ಕಳೆದ ಐದು ಶತಮಾನಗಳಿಂದಲೂ ಹೊಂದಿರುವ ಕೊಕ್ಕರೆಗಳ ನಿಕಟ ಸಂಬAಧದಿAದಾಗಿ ನಿಸರ್ಗ ಪಕ್ಷಿಧಾಮವೆಂದೇ ಪ್ರಸಿದ್ಧವಾಗಿದೆ. ಜಿಲ್ಲೆಯ ರಂಗನತಿಟ್ಟು, ಹೇಮಗಿರಿ, ಮತ್ತು ಗೆಂಡೇಹೊಸಹಳ್ಳಿಯ ಪರಿಸರಕ್ಕಿಂತ ಇದು ಸ್ವಲ್ಪ ಭಿನ್ನವಾಗಿದ್ದು, ಊರ ಮಧ್ಯದಲ್ಲಿರುವ ಹುಣಸೆ, ಗೊಬ್ಬಳಿ ಮುಂತಾದ ಹತ್ತಾರು ಮರಗಳ ಮೇಲೆ, ಬೇರೆಡೆಗಳಿಂದ ವಲಸೆ ಬಂದು ಜನವರಿಯಿಂದ ಜುಲೈವರೆಗೆ ನೆಲೆಯೂರುವ ಕೊಕ್ಕರೆಗಳು ಗೂಡು ಕಟ್ಟಿ, ಮರಿ ಮಾಡಿಕೊಂಡು ಸ್ವಸ್ಥಾನಕ್ಕೆ ಹಿಂತಿರುಗುವುದರಿAದ, ಬೆಳ್ಳೂರಿನೊಂದಿಗೆ ಕೊಕ್ಕರೆ ಪದವೂ ತಳಕು ಹಾಕಿಕೊಂಡಿದ್ದು, ಕೊಕ್ಕರೆ ಬೆಳ್ಳೂರು ಪ್ರಾಕೃತಿಕ ಪಕ್ಷಿಧಾಮವಾಗಿದೆ. ಈ ಊರ ಗಿಡಮರಗಳ ತುಂಬಾ ಕುಳಿತ ಕೊಕ್ಕರೆಗಳೆಷ್ಟೋ! ಗಗನದಲ್ಲಿ ಹಾರಾಡುತ್ತಿರುವುದೆಷ್ಟೋ !ಅವುಗಳ ಕೊಕ್ಕು, ಕೊರಳು, ಪಾದ ಹಾಗೂ ಪುಕ್ಕಗಳಲ್ಲಿರುವ ಕಿಂಚಿತ್ ವರ್ಣವ್ಯತ್ಯಾಸ ಒಡೆದು ಕಾಣುತ್ತಿದ್ದು, ಕೆಲವು ನಸುಗೆಂಪಾಗಿದ್ದರೆ, ಹಲವು ನಸುಕಪ್ಪಾಗಿದ್ದು, ಹೆಚ್ಚಿನವು ಬಿಳುಪು ಬಣ್ಣದವು. ಪ್ರತೀ ವರ್ಷ ಸಂಕ್ರಾAತಿ (ಜನವರಿ) ಆಸುಪಾಸಲ್ಲಿ ಕಾಣಿಸಿಕೊಳ್ಳುವ ಹೆಜ್ಜಾರ್ಲೆ (ಪೆಲಿಕಾನ್) ಹಾಗೂ ಬೆಳ್ಳಕ್ಕಿಗಳು ಗೂಡು ಕಟ್ಟಿ, ಮೊಟ್ಟೆಯಿಕ್ಕಿ ಮರಿ ಮಾಡಿಕೊಂಡು ಮಳೆಗಾಲಕ್ಕೆ (ಜುಲೈ) ಮೊದಲು, ಬಾಣಂತನಕ್ಕೆ ತೌರಿಗೆ ಬಂದ ಹೆಣ್ಣು ಮಗಳಂತೆ ಬಲಿತ ಮರಿಗಳೊಂದಿಗೆ ಸ್ವಸ್ಥಾನಕ್ಕೆ ಕಾಲ್ತೆಗೆಯುತ್ತವೆ.