ಮುಚ್ಚಿ

ಗಗನ ಚುಕ್ಕಿ ಜಲಪಾತ

ನಿರ್ದೇಶನ
ವರ್ಗ ಇತರೆ, ನೈಸರ್ಗಿಕ / ಮನೋಹರ ಸೌಂದರ್ಯ

ತಾಲೂಕು ಕೇಂದ್ರ ಮಳವಳ್ಳಿಯಿಂದ 20 ಕಿ.ಮೀ. ಆಗ್ನೇಯಕ್ಕೆ, ಮಳವಳ್ಳಿ-ಕೊಳ್ಳೇಗಾಲ ರಸ್ತೆಯಲ್ಲಿ ಶಿವಸಮುದ್ರ ತೋಳ್ಗಂಬದಿAದ ಒಂದು ಕಿ.ಮೀ. ಒಳಕ್ಕಾದಂತಿದೆ. ಕಾವೇರಿ ನೀರಿನಿಂದ ವಿದ್ಯುತ್ತನ್ನು ಉತ್ಪಾದಿಸುವ ಸಲುವಾಗಿ ಅಂದಿನ ದಿವಾನರಾಗಿದ್ದ ಸರ್.ಕೆ.ಶೇಷಾದ್ರಿ ಅಯ್ಯರ್ ಅವರು ನಿರಂತರವಾಗಿ ಪರಿಶ್ರಮಿಸಿದ್ದರ ಪರಿಣಾಮವಾಗಿ 30-6-1902ರಂದು, ಅಂದಿನ ಬ್ರಿಟೀಷ್ ರೆಸಿಡೆಂಟರಾದ ಕರ್ನಲ್ ಡೊನಾಲ್ಡ್ ರಾಬರ್ಟಸನ್ನರ ಪತ್ನಿಯಿಂದ ಇದು ಉದ್ಘಾಟಿಸಲ್ಪಟ್ಟಾಗ, ಆ ವೇಳೆಗಾಗಲೇ ನಿಧನರಾಗಿದ್ದ ದಿವಾನ ಕೆ.ಶೇಷಾದ್ರಿ ಅಯ್ಯರ್ ಅವರ ಹೆಸರನ್ನೇ ಈ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಇಡಲಾಯಿತು. ವಿದ್ಯುತ್ ಉತ್ಪಾದನೆಗೆ ಅನುಕೂಲವಾಗಲೆಂದು ಜಲಸಂಗ್ರಹಕ್ಕೆAದು ಫೋರ್ಟ್ ಸಾಗರವನ್ನು ನಿರ್ಮಿಸಲಾಗಿದೆ. ಮುಂದೆ ಅಲ್ಲಿಂದ ಬರುವ ನೀರನ್ನು ಫೊರ್ ಬೇ ಜಲಾಶಯದಲ್ಲಿ ನಿಯಂತ್ರಿಸಲಾಗಿದ್ದು, ಅಲ್ಲಿಂದ ದೊಡ್ಡ ಕೊಳವೆ ಮೂಲಕ ನೀರನ್ನು ಸುಮಾರು 450 ಅಡಿ ಆಳದಲ್ಲಿರುವ ವಿದ್ಯುತ್ ಜನಕ ಯಂತ್ರಗಳಿಗೆ ಹರಿಸಿದಾಗ ಯಂತ್ರಗಳು ವೇಗವಾಗಿ ಚಲಿಸಿ, ವಿದ್ಯುತ್ ಉತ್ಪಾದನೆ ಆಗುತ್ತದೆ. ದಿನಾಂಕ 6-8-1902ರಲ್ಲಿ 1250 ಎಚ್.ಪಿ.ಯ ಎರಡು ಸಂಚರಣ ಯಂತ್ರಗಳೊAದಿಗೆ ವಿದ್ಯುತ್ ಉತ್ಪಾದಿಸತೊಡಗಿದ ಇದು ಆರಂಭದಲ್ಲಿ 5600 ಕಿ.ವ್ಯಾ ವಿದ್ಯುತ್ತನ್ನು ಉತ್ಪಾದಿಸುತ್ತಿದ್ದು, 144 ಕಿ.ಮೀ. ದೂರದಲ್ಲಿದ್ದ ಕೋಲಾರದ ಚಿನ್ನದ ಗಣಿಗೆ ಅಗತ್ಯವಿದ್ದ ವಿದ್ಯುತ್ತನ್ನು ತಂತಿಯ ಮೂಲಕ ಸರಬರಾಜು ಮಾಡುವುದೇ ಇದರ ಪ್ರಧಾನ ಉದ್ದೇಶವಾಗಿತ್ತು. ಕಾವೇರಿಯ ಎಡದಡದಲ್ಲಿರುವ ಗಗನಚುಕ್ಕಿ ಜಲಪಾತದ ಪಾರ್ಶ್ವ ದೃಶ್ಯ ವಿಶಿಷ್ಟ ಅನುಭವವನ್ನು ನೀಡುತ್ತದೆ.ಇದು ಕಾವೇರಿಯ ಎಡ ಕವಲಾಗಿದ್ದು, ಸುಮಾರು ಮುನ್ನೂರು ಅಡಿ ಎತ್ತರದಿಂದ ವೈಯ್ಯಾರದಿಂದ ಗಗನದಿಂದಲೇ ಧುಮುಕುತ್ತಿರುವಂತೆ ಭಾಸವಾಗುತ್ತಿದ್ದು, ಆದ್ದರಿಂದಲೇ ಗಗನಚುಕ್ಕಿ ಎಂಬ ಹೆಸರು ಬಂದಿದೆ.