ಮುಚ್ಚಿ

ಮೇಲುಕೋಟೆ

ನಿರ್ದೇಶನ
ವರ್ಗ ಅಡ್ವೆಂಚರ್, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ತಾಲೂಕು ಕೇಂದ್ರ ಪಾಂಡವಪುರದಿAದ 24 ಕಿ.ಮೀ. ಉತ್ತರಕ್ಕೆ, ಜಿಲ್ಲಾ ಕೇಂದ್ರ ಮಂಡ್ಯದಿAದ 40 ಕಿ.ಮೀ. ವಾಯವ್ಯಕ್ಕೆ ಹಾಗೂ ರಾಜಧಾನಿ ಬೆಂಗಳೂರಿನಿAದ 130 ಕಿ.ಮೀ.ನೈಋತ್ಯಕ್ಕೆ ಸುಮಾರು 3589 ಅಡಿ ಎತ್ತರದ ಯದುಗಿರಿ ಬೆಟ್ಟದ ಮೇಲಿರುವ ಚಾರಿತ್ರಿಕ, ಧಾರ್ಮಿಕ ಮಹತ್ವದ ಸ್ಥಳ. ತೀರ್ಥಕ್ಷೇತ್ರಪುರ. ಶ್ರೀವೈಷ್ಣವಯತಿ, ವಿಶಿಷ್ಟಾದ್ವೆÊತ ಸಿದ್ಧಾಂತ ಪ್ರತಿಪಾದಕರಾದ ಆಚರ‍್ಯ ರಾಮಾನುಜರ ಕರ್ಮಭೂಮಿ, ಪವಿತ್ರತಾಣ.

ಹೊಯ್ಸಳ ಶಾಸನಗಳಲ್ಲಿ `ಯಾದವಗಿರಿ’, ತಿರುನಾರಾಯಣಪುರ, ಮೇಲುಗೋಟೆ ಎಂದು ಉಲ್ಲೇಖಿತಗೊಂಡಿರುವ ಇದು, ವೈಕುಂಠ ವರ್ಧನ ಕ್ಷೇತ್ರ ಎಂಬ ವಿಶೇಷಣವನ್ನೂ ಹೊಂದಿತ್ತು. ವಿಜಯನಗರ ಕಾಲದ ಶಾಸನಗಳಲ್ಲಿ `ಘಟಿಕಾಸ್ಥಾನ ಮೇಲುಕೋಟೆ’ (ದೇವಲಾಪುರ ಕ್ರಿ.ಶ.1472), ಅನಾದಿ ಮಹಾಸ್ವಾಮಿಸ್ಥಾನ, ವೈಕುಂಠ ವರ್ಧನ ಕ್ಷೇತ್ರ, ಭೂಲೋಕ ವೈಕುಂಠ, e್ಞÁನಮಂಟಪ, ದಕ್ಷಿಣಬದರಿಕಾಶ್ರಮ ಎಂಬ ವಿಶೇಷಣಗಳನ್ನು ಹೊಂದಿದ್ದು, ಮೈಸೂರು ಅರಸರ ಕಾಲದಲ್ಲೂ ಅದೇ ಮುಂದುವರಿಯಿತು. ಹೋಬಳಿ ಕೇಂದ್ರವಾದ ಇದು, ಹೊಯ್ಸಳ ವಿಷ್ಣುವರ್ಧನನ ಕಾಲದಿಂದ (ಕ್ರಿ.ಶ. 1008-1148) ಮೈಸೂರು ಅರಸರ ಕಾಲದವರೆಗೆ ನಿರಂತರ ರಾಜಾಶ್ರಯ ಪಡೆದಿತ್ತು.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ವಿಶ್ವ ವಿಖ್ಯಾತ ಪ್ರವಾಸಿ ತಾಣ ಮೇಲುಕೋಟೆಯು ರಾಜ್ಯದಲ್ಲಿನ ಅತ್ಯಂತ ಪ್ರಮುಖ ಧಾರ್ಮಿಕ, ಪಾರಂಪರಿಕ ಹಾಗೂ ಐತಿಹಾಸಿಕ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.ಇಲ್ಲಿನ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯ, ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ, ಪಂಚಕಲ್ಯಾಣಿ, ಅಕ್ಕತಂಗಿ ಕೊಳ, ರಾಯಗೋಪುರ, ಧನುಷ್ಕೋಟಿ ಮುಂತಾದ ಇನ್ನೂ ಹತ್ತು ಹಲವು ಸ್ಮಾರಕಗಳು ದೇಶ ವಿದೇಶಗಳ ಪ್ರವಾಸಿಗರನ್ನು ಪ್ರತಿನಿತ್ಯ ಸೆಳೆಯುತ್ತಿವೆ.