ಮುಚ್ಚಿ
ವರ್ಗ ಅಡ್ವೆಂಚರ್, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ಕಾವೇರಿ ನದಿಯು 02 ಕವಲಾಗಿ ಒಡೆದು ಶ್ರೀರಂಗಪಟ್ಟಣವನ್ನು ದ್ವೀಪವನ್ನಾಗಿ ಪರಿವರ್ತಿಸಿ ಮತ್ತೆ ಒಂದು ಗೂಡುವ ಸ್ಥಳವೇ ಸಂಗಮ.ಈ ತಾಣವನ್ನು ವೀಕ್ಷಿಸಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಗುಂಬಜಿನಿAದ ಪೂರ್ವಕ್ಕೆ ಸಾಗಿದರೆ, ಗೌತಮಾಶ್ರಮದ ಬಳಿ ಕವಲೊಡೆದು ಈ ದ್ವೀಪವನ್ನು ಕಲ್ಪಿಸಿರುವ ಕಾವೇರಿಯ ಉತ್ತರ-ದಕ್ಷಿಣ ಶಾಖೆಗಳು ಸಂಗಮದಲ್ಲಿ ಒಂದಾಗಿ ಮುಂದೆ ಹರಿಯುವ ರಮಣೀಯ ದೃಶ್ಯ ನಿಸರ್ಗಪ್ರೇಮಿಗಳಿಗೆ ಮುದ ನೀಡುತ್ತಿದ್ದು, ಅನತಿ ದೂರದಲ್ಲೇ ಕಾವೇರಿಯೊಂದಿಗೆ ಲೋಕಪಾವನಿಯು ಸಂಗಮಿಸುವ ತಾಣವನ್ನು ನೋಡಬಹುದಾಗಿದೆ.