ಹುಲಿಕೆರೆ
ನಿರ್ದೇಶನವರ್ಗ ಇತರೆ
1932 ರಲ್ಲಿ ಕಾವೇರಿ ನದಿಯ ಮೇಲೆ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸಿದಾಗ, ಮಂಡ್ಯ ಜಿಲ್ಲೆಯ ಕಾಳೇನಹಳ್ಳಿಯ ಹುಲಿಕೆರೆ ಎಂಬ ಸಣ್ಣ ಕೃಷಿ ಗ್ರಾಮಕ್ಕೆ ನೀರು ಸರಬರಾಜು ಸೀಮಿತವಾಗಿತ್ತು.ಪರಿಹಾರವಾಗಿ ಸರ್ ಎಂ ವಿಶ್ವೇಶ್ವರಯ್ಯ ರವರು ಹುಲಿಕೆರೆ ಸುರಂಗವನ್ನು ವಿನ್ಯಾಸಗೊಳಿಸಿದರು. ಈ ಸುರಂಗವು ಕೆ.ಆರ್.ಎಸ್ ಅಣೆಕಟ್ಟು ಹಿನ್ನೀರನ್ನು ಹುಲಿಕೆರೆ ಗ್ರಾಮಕ್ಕೆ ಸಾಗಿಸುತ್ತದೆ.ಸುರಂಗವು ಸುಮಾರು 100 ವರ್ಷಗಳಷ್ಟು ಹಳೆಯದಾಗಿದ್ದು, ಹಳ್ಳಿಯ ಜನರು/ರೈತರು ನೀರಾವರಿಗಾಗಿ ಅವಲಂಬಿತವಾಗಿದ್ದಾರೆ.