ಮುಚ್ಚಿ

ಹೊಸಹೊಳಲು

ನಿರ್ದೇಶನ
ವರ್ಗ ಐತಿಹಾಸಿಕ

ತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ ಮೂರು ಕಿ.ಮೀ. ನೈಋತ್ಯಕ್ಕಿದ್ದು, ಹೊಯ್ಸಳರ ಕಾಲದ ನಯನಮನೋಹರ ದೇವಾಲಯದಿಂದಾಗಿ ಪ್ರಸಿದ್ಧವಾಗಿದ್ದು ನೇಕಾರಿಕೆಗೂ ಹೆಸರಾಗಿದೆ. ಇಲ್ಲಿಯ ಲಕ್ಷಿö್ಮÃನಾರಾಯಣ ದೇವಾಲಯವು ಹೊಯ್ಸಳ ವಾಸ್ತುಶಿಲ್ಪ ಕಲಾ ಐಸಿರಿಯ ಸುಂದರ ನಿದರ್ಶನವಾಗಿದೆ.ಸೂಕ್ಷö್ಮ ಕೆತ್ತನೆಯಿಂದೊಡಗೂಡಿದ ಉತ್ಕೃಷ್ಟ ಅಲಂಕಾರಿಕ ಶಿಲ್ಪಗಳ ಸಂಯೋಜನೆಯಲ್ಲಿ ಕಂಡು ಬರುವ ಹೊಂದಾಣಿಕೆ, ಪ್ರಮಾಣಬದ್ಧತೆ ಹಾಗೂ ಪ್ರಬುದ್ಧತೆಗಳಿಂದಾಗಿ ವೀಕ್ಷಕರಿಗೆ ಅವಿಸ್ಮರಣೀಯ ಆನಂದ ನೀಡುತ್ತದೆ.ಆರು ಪಟ್ಟಿಕೆಯನ್ನುಳ್ಳ ಮೂರು ಅಡಿ ಎತ್ತರದ ಜಗತಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿರುವ, ಬಹುಕೋನಾಕಾರದ ತಳವಿನ್ಯಾಸವನ್ನು ಹೊಂದಿರುವ ಇದು ಮೂರು ಗರ್ಭಗೃಹಗಳನ್ನು ಹೊಂದಿದ್ದು, ಪ್ರಧಾನ ಗರ್ಭಗೃಹಕ್ಕಷ್ಟೇ ಅಂತರಾಳವಿದ್ದು, ಎಲ್ಲವನ್ನೂ ನಡುವೆ ಇರುವ ಒಂದೇ ನವರಂಗವು ಒಗ್ಗೂಡಿಸಿದೆ.