ಮುಚ್ಚಿ

ಕಿಕ್ಕೇರಿ

ನಿರ್ದೇಶನ
ವರ್ಗ ಐತಿಹಾಸಿಕ, ಧಾರ್ಮಿಕ

ತಾಲೂಕು ಕೇಂದ್ರ ಕೃಷ್ಣರಾಜಪೇಟೆಯಿಂದ 14 ಕಿ.ಮೀ. ವಾಯವ್ಯಕ್ಕಿರುವ ಹೋಬಳಿ ಕೇಂದ್ರ. ಹೊಯ್ಸಳರ ಕಾಲದ ಕಲಾತ್ಮಕ ದೇವಾಲಯಗಳಿಂದಾಗಿ ಪ್ರಸಿದ್ಧವಾಗಿದೆ. ಕ್ರಿ.ಶ.11-13ನೆಯ ಶತಮಾನದ ಶಿಲಾಶಾಸನಗಳಲ್ಲಿ `ಕಿಕ್ಕೇರಿ, ಕಿಕ್ಕೇರಿಪುರ’ ಎಂದೇ ಉಲ್ಲೇಖಿತಗೊಂಡಿದ್ದು, ಹೊಯ್ಸಳರ ಕಾಲದಲ್ಲಿ ಅಗ್ರಹಾರವಾಗಿದ್ದ ಇದಕ್ಕೆ `ಸರ್ವಜ್ಞಪುರ’ ಎಂಬ ಹೆಸರು ಸಹ ಇತ್ತು. ಇಲ್ಲಿಯ ಬ್ರಹ್ಮೇಶ್ವರ ದೇವಾಲಯದ ನಂದಿ ಮಂಟಪದಲ್ಲಿರುವ ಒಂದನೆಯ ನರಸಿಂಹನ ಕಾಲಕ್ಕೆ ಸೇರಿದ ಕ್ರಿ.ಶ.1171ರ ಶಾಸನವು, ಸಾಮಂತ ಬರ್ಮ್ಮಯ್ಯನ ಮಡದಿ ಬಮ್ಮವ್ವೆ ನಾಯಕಿಯು, ಕಿಕ್ಕೇರಿಪುರದಲ್ಲಿ ನಿರ್ಮಿಸಿದ ಬ್ರಹ್ಮೇಶ್ವರ ದೇವಾಲಯಕ್ಕೆ ದಾನ ನೀಡಿದ್ದನ್ನು ದಾಖಲಿಸಿದೆ. ಗರ್ಭಗೃಹ, ಸುಖನಾಸಿ, ನವರಂಗ, ಮುಖಮಂಟಪ ಹಾಗೂ ನಂದಿಮAಟಪಗಳನ್ನು ಹೊಂದಿರುವ ಅಪೂರ್ವ ಶಿಲ್ಪ ಕೆತ್ತನೆಗಳಿಂದ ಕೂಡಿರುವ ಈ ದೇವಾಲಯದ ಗರ್ಭಗೃಹಕ್ಕೆ ದ್ರಾವಿಡ ಶಿಖರವಿದೆ.