ಕೃಷಿ
ಕೃಷ್ಣ ರಾಜ ಸಾಗರ ಅಣೆಕಟ್ಟು ನಿರ್ಮಾಣದ ನಂತರ ಜಿಲ್ಲೆಯು ನೀರಾವರಿ ಸೌಲಭ್ಯ ಪಡೆದು ಆಧುನಿಕ ಬೇಸಾಯ ಪದ್ದತಿಗಳ ಪಾದಾರ್ಪಣೆಯ ನಂತರ ಹಸಿರು ಕ್ರಾಂತಿಯ ಪ್ರಭಾವ ಉಂಟಾಗಿ, ಜಿಲ್ಲೆಯು ಪ್ರಗತಿ ಸಾಗಿದೆ. ಜಿಲ್ಲೆಯಲ್ಲಿ ಆಹಾರ ಮತ್ತು ವಾಣಿಜ್ಯ ಬೆಳೆಗಳಾದ ಭತ್ತ, ಕಬ್ಬು,ತೆಂಗು, ರೇಷ್ಮೆ ಬೆಳೆಯಲಾಗಿದೆ.
ಜಿಲ್ಲೆಯ ಒಟ್ಟು ಭೌಗೋಳಿಕ ಪ್ರದೇಶವು 4,98,244 ಹೆಕ್ಟೇರ್ ಆಗಿದೆ, ಅದರಲ್ಲಿ 2,48,825 ಹೆಕ್ಟೇರ್ ಪ್ರದೇಶವು ಬಿತ್ತನೆಯ ಪ್ರದೇಶವನ್ನು ಹೊಂದಿದೆ. ಜಿಲ್ಲೆಯ ಒಟ್ಟು ಭೂ ಪ್ರದೇಶದ ಅರ್ಧಕ್ಕಿಂತಲೂ ಹೆಚ್ಚು ಕೃಷಿ ಬಳಕೆಗೆ ಇಡಲಾಗಿದೆ. ಒಟ್ಟು ನೀರಾವರಿ ಪ್ರದೇಶವು 1,16,901 ಹೆಕ್ಟೇರ್ ಆಗಿದ್ದು, ಇದರಲ್ಲಿ ಸುಮಾರು 88,000 ಹೆಕ್ಟೇರ್ ಕೆ.ಆರ್.ಸಾಗರ ಜಲಾಶಯದಿಂದ ನೀರಾವರಿ ಮಾಡಲಾಗುತ್ತಿದೆ ಮತ್ತು ಸುಮಾರು 16,000 ಹೆಕ್ಟೇರ್ ಹೆಮಾವತಿ ಜಲಾಶಯದಿಂದ ನೀರಾವರಿ ಮಾಡಲಾಗುತ್ತಿದೆ. ಉಳಿದ ಪ್ರದೇಶಗಳು ಟ್ಯಾಂಕುಗಳು, ಬಾವಿಗಳು ಮತ್ತು ಕೊಳವೆ ಬಾವಿಗಳಂತಹ ಇತರ ಮೂಲಗಳಿಂದ ನೀರಾವರಿ ಮಾಡಲ್ಪಟ್ಟಿವೆ.