ಮುಚ್ಚಿ

ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ (ಸಿ.ಎಂ.ಕೆ.ಕೆ.ವೈ)

ಮುಖ್ಯಮಂತ್ರಿಗಳ ಕೌಶಲ್ಯಕ ರ್ನಾಟಕ ಯೋಜನೆ (ಸಿ.ಎಂ.ಕೆ.ಕೆ.ವೈ)ಯು ವಾರ್ಷಿಕವಾಗಿ 5 ಲಕ್ಷಯುವಕರಿಗೆ ಕೌಶಲ್ಯ ತರಬೇತಿ ನೀಡಲು ಯೋಜಿಸಿದೆ. ಅದರಲ್ಲಿ 2.50 ಲಕ್ಷಯುವಕರಿಗೆ ಎಸ್.ಡಿ.ಇ.ಎಲ್(SDEL)ನಿಂದ ನೇರವಾಗಿ ಅನುಷ್ಠಾನಗೊಳಿಸಿದ ಯೋಜನೆಗಳ ಅಡಿಯಲ್ಲಿ ಮತ್ತು 2.50 ಲಕ್ಷ ಯುವಕರಿಗೆ ಇತರ ಸರ್ಕಾರಿ ಇಲಾಖೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಜಾರಿಗೊಳಿಸಿದ ಯೋಜನೆಗಳ ಅಡಿಯಲ್ಲಿ ಕೌಶಲ್ಯ ತರಬೇತಿ ನೀಡಲುಯೋಜಿಸಿದೆ.

ನೂತನವಾಗಿ ರಚನೆಗೊಂಡಿರುವ ಇಲಾಖೆಯು ವಿವಿಧ ಇಲಾಖೆಗಳು ಆಯೋಜಿಸುವ ಕೌಶಲ್ಯ ತರಬೇತಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿತು. ವಿವಿಧ ಕೌಶಲ್ಯಗಳ ಸಂಗ್ರಹ ಮತ್ತು ಕೆಲಸದ ಪಾತ್ರಗಳನ್ನು ಮೌಲ್ಯಕರಿಸಲಾಯಿತು ಹಾಗೂ ವಿಷಯ, ಪಠ್ಯಕ್ರಮ, ತರಬೇತುದಾರರ ಆಯ್ಕೆ, ತರಬೇತಿ ನೀಡುವವರ ಆಯ್ಕೆ, ತರಬೇತಾಸಾಕ್ತರ ಮೌಲ್ಯಮಾಪನ ಮತ್ತು ಅವರ ಉದ್ಯೋಗವನ್ನು ಪ್ರಮಾಣೀಕರಿಸುವುದನ್ನು ಕೂಡ ಕಲ್ಪಿಸಲಾಗುತ್ತಿದೆ. ಶಾಲೆಯಿಂದ ಹೊರಗುಳಿದವರು ಮತ್ತು ಅಸ್ತಿತ್ವದಲ್ಲಿರುವ ಕೆಲಸಗಾರರಿಗೆ, ವಿಶೇಷವಾಗಿ ಅನೌಪಚಾರಿಕ ವಲಯದಲ್ಲಿ ಕೈಗಾರಿಕೆ, ಅನೌಪಚಾರಿಕ ವಲಯದ ಮೈಕ್ರೋ ಎಂಟರ್ಪ್ರೈಸಸ್, ರಾಜ್ಯಸರ್ಕಾರಗಳು, ತಜ್ಞರು ಮತ್ತು ಅಕಾಡೆಮಿಯೊಂದಿಗೆ ನಿಕಟ ಸಮಾಲೋಚನೆ ಮೂಲಕ ಕೌಶಲ್ಯ ಅಭಿವೃದ್ಧಿಗಾಗಿ ಹೊಸಕಾರ್ಯ ತಂತ್ರದ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಸಿಎಂಕೆಕೆವೈ ಯೋಜನೆಯಡಿ ಕೇಂದ್ರಸರ್ಕಾರ, ರಾಜ್ಯಸರ್ಕಾರಗಳು, ಸಾರ್ವಜನಿಕ ಮತ್ತು ಖಾಸಗಿ ವಲಯ ಮತ್ತು ಕೈಗಾರಿಕಾ ಸಂಸ್ಥೆಗಳ ಅಡಿಯಲ್ಲಿ ವಿವಿಧ ತರಬೇತುದಾರದಿಂದ ತರಬೇತಿ ನೀಡಲು ಯೋಜಿಸಲಾಗಿದೆ. ಟಿಪಿಗಳು ಮತ್ತು ಟಿಸಿಗಳ ಸಂಯೋಜನೆಗಾಗಿ ಒಂದು ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಈ ಕಾರ್ಯ ವಿಧಾನವು ಪಾರದರ್ಶಕವಾಗಿರಬೇಕು ಮತ್ತು ಸುಲಭವಾಗಿ ಗ್ರಹಿಸಬಹುದಾಗಿದೆ. ಎಲ್ಲಾ ಆಸಕ್ತ ಟಿಪಿಗಳು ಮತ್ತು ಟಿಸಿಗಳು ನೋಂದಣಿ ಮತ್ತು ನಂತರದ ಮಾನ್ಯತೆಗೆ ಅಗತ್ಯವಿರುವ ವಿವಿಧ ವಿವರಗಳನ್ನು ಭರ್ತಿಮಾಡುವ ಆನ್ಲೈನ್ಸೌಲಭ್ಯವನ್ನು ರಚಿಸಲಾಗಿದೆ.

TC details

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ KAUSHALYA KARNATAKA/