ಮುಚ್ಚಿ

ಕೃಷ್ಣರಾಜಸಾಗರ ಅಣೆಕಟ್ಟು

ನಿರ್ದೇಶನ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ತಾಲೂಕು ಕೇಂದ್ರ ಪಾಂಡವಪುರದಿAದ 18 ಕಿ.ಮೀ.ಹಾಗೂ ಪಾಂಡವಪುರ ರೈಲು ನಿಲ್ದಾಣದಿಂದ 15 ಕಿ.ಮೀ. ನೈಋತ್ಯಕ್ಕೆ ಕನ್ನಂಬಾಡಿ (ಕೃಷ್ಣರಾಜಸಾಗರ)ಯ ಹಿನ್ನೀರಿನಲ್ಲಿ ಪ್ರಸ್ತುತ ಮುಳುಗಡೆಯಾಗಿರುವ ನಿರ್ವಸತಿ ಗ್ರಾಮವಾದರೂ ಮುಳುಗಡೆಯಾಗಿರುವ ಗೋಪಾಲಕೃಷ್ಣ ದೇವಾಲಯದಿಂದಾಗಿ ಮಹತ್ವ ಪಡೆದಿದೆ. ಪ್ರಾಚೀನ ಶಾಸನಗಳಲ್ಲಿ `ಕನಂಬಾಡಿ’, `ಕನ್ನಂಬಾಡಿ’ ಎಂದೇ ಉಲ್ಲೇಖಿತಗೊಂಡಿದ್ದು,’ ಮಹಾಅಗ್ರಹಾರ’ ಎಂಬ ವಿಶೇಷಣವನ್ನೂ ಹೊಂದಿದ್ದ ಇದು ಹಿಂದೆ ಕಣ್ವ ಋಷಿಗಳ ಆಶ್ರಮ ಪ್ರದೇಶವಾಗಿದ್ದು, ಅವರೇ ಪ್ರತಿಷ್ಠಾಪಿಸಿರುವ ಕಣ್ವೇಶ್ವರ ಲಿಂಗವಿಲ್ಲಿತ್ತೆAಬ ಐತಿಹ್ಯವಿದೆ. ಪೌರಾಣಿಕವಾಗಿ ಕನ್ನಂಬಾಡಿಯನ್ನು ಕಾಶಿಗೂ, ಕಾವೇರಿಯನ್ನು ಗಂಗೆಗೂ, ಕಣ್ವೇಶ್ವರ-ಗೋಪಾಲಕೃಷ್ಣರನ್ನು ಕ್ರಮವಾಗಿ ಕಾಶಿವಿಶ್ವನಾಥ-ಬಿಂದುಮಾಧವರಿಗೂ ಹೋಲಿಸಲಾಗುತ್ತಿದ್ದು, ಕನ್ನಂಬಾಡಿಯ 1818 ಹಾಗೂ 1859ರ ಶಾಸನಗಳು ಇದನ್ನು `ಕಣ್ವಪುರಿಕ್ಷೇತ್ರ’ ಎಂದೇ ಕರೆದಿವೆ. ಕನ್ನಂಬಾಡಿ ಮುಳುಗಡೆ ಗ್ರಾಮದಿಂದ ಈಗಾಗಲೇ ವರದಿಯಾಗಿರುವ 24 ಶಾಸನಗಳಲ್ಲಿ, ಎಂಟು ಗೋಪಾಲಕೃಷ್ಣನಿಗೂ ಎಂಟು ಕಣ್ಣೇಶ್ವರನಿಗೂ ಹಾಗೂ ಉಳಿದೆಂಟು ಮಹಾಲಕ್ಷಿö್ಮÃಗೂ ಸಂಬAಧಿಸಿದ್ದು, ಅವುಗಳಲ್ಲೊಂದು ತಾಮ್ರಶಾಸನವಾಗಿದೆ.