• ಸೈಟ್ ನಕ್ಷೆ
  • Accessibility Links
  • ಕನ್ನಡ
ಮುಚ್ಚಿ

ರಂಗನತಿಟ್ಟು

ನಿರ್ದೇಶನ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ತಾಲೂಕು ಕೇಂದ್ರ ಶ್ರೀರಂಗಪಟ್ಟಣದಿAದ ಮೂರು ಕಿ.ಮೀ. ಪಶ್ಚಿಮಕ್ಕೆ, ಪಶ್ಚಿಮವಾಹಿನಿಗೆ ಅನತಿ ದೂರದಲ್ಲಿ ಸುಮಾರು 0.67 ಚದುರ ಕಿ.ಮೀ. ವಿಸ್ತೀರ್ಣದ ನಾಲ್ಕಾರು ಕಿರುದ್ವೀಪಗಳನ್ನು ತನ್ನೊಡಲಲ್ಲಿ ನಿರ್ಮಿಸಿರುವ ಕಾವೇರಿಯು, ಇಲ್ಲಿ ಕವಲೊಡೆದು ನಾಲ್ಕು ರ‍್ಲಾಂಗ್ ದೂರ ಹರಿದು ಮತ್ತೆ ಒಂದಾಗುತ್ತದೆ.ಸುಣ್ಣದ ಕಲ್ಲಿನಿಂದೊಡಗೂಡಿದ ಈ ದ್ವೀಪಕ್ಕೆ ನಿರ್ದಿಷ್ಟ ಸಮಯದಲ್ಲಿ ದೇಶ-ವಿದೇಶಗಳಿಂದ ಬಂದು ಹೋಗುವ ವಿವಿಧ ಪಕ್ಷಿಗಳಿಂದಾಗಿ ಇದೊಂದು ಪ್ರಾಕೃತಿಕ ಪಕ್ಷಿಧಾಮವಾಗಿದೆ. ಪಕ್ಷಿಪ್ರೇಮಿ ಹಾಗೂ ಪಕ್ಷಿ ಶಾಸ್ತçಜ್ಞ ಸಲೀಂ ಅಲಿ ಅವರಿಂದಾಗಿ 1940ರ ಜೂನ್ ಒಂದರಿAದ ಇದನ್ನು `ರಾಷ್ಟಿçÃಯ ಪಕ್ಷಿಧಾಮ’ವೆಂದು ಘೋಷಿಸಿ ಸಂರಕ್ಷಿಸಲಾಗುತ್ತಿದೆ. ಇಲ್ಲಿಯ ಮಡುವಿನಲ್ಲಿ ಮೊಸಳೆಗಳೊಂದಿಗೆ ನೀರುನಾಯಿ; ಬಳಿ, ಕೂರಲು, ಮುಚ್ಯಾಲು, ಕೆಮ್ಮೀನು, ಬಾಳೆ, ಗೂಡ್ಲೆ, ಬಂಗಿಸಿದ್ದ, ಅವಲುಕುಚ್ಚು, ಕೊರವ, ಹಾವು, ಅರ್ಜಗೆಂಡ, ಮುಂತಾದ ಜಾತಿಯ ಮೀನುಗಳೂ ಇದ್ದು, ದೊಡ್ಡ ದ್ವೀಪದಲ್ಲಿ ಗಿಡಮರಗಳು ದಟ್ಟವಾಗಿರುವ ಎಡೆಯಲ್ಲಿ ನವಿಲು, ನರಿ, ಮೊಲ, ಕಾಡುದನ, ಜಿಂಕೆ, ಮುಂತಾದ ಪ್ರಾಣಿಗಳೂ ಇವೆ. ಪ್ರಕೃತಿ ನಿರ್ಮಿತ ಈ ದ್ವೀಪ ಸಮೂಹವು ಪಕ್ಷಿಗಳಿಗೆ ಪ್ರಾಕೃತಿಕ ರಕ್ಷಣೆ, ನೈಸರ್ಗಿಕ ಆಹಾರ ಲಭ್ಯತೆಯ ಅವಕಾಶಗಳನ್ನು ಕಲ್ಪಿಸಿದ್ದು, ಡಿಸೆಂಬರ್-ಜನವರಿಯಿAದ ಅಕ್ಟೋಬರ್ ವರೆಗೆ ಇಲ್ಲಿಗೆ ಬಂದು ಹೋಗುವ ವಿವಿಧ ಪ್ರದೇಶದ ಪಕ್ಷಿಗಳ ಹಿಂಡು ಕಣ್ಣಿಗೆ ಮುದ ನೀಡುತ್ತದೆ.