ಮುಚ್ಚಿ

ಬೃಂದಾವನ ಗಾರ್ಡನ್

ನಿರ್ದೇಶನ
ವರ್ಗ ಇತರೆ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ಕಾವೇರಿ ನದಿಗೆ ಕನ್ನಂಬಾಡಿ ಬಳಿ ನಿರ್ಮಿಸಿರುವ ಅಣೆಕಟ್ಟೆಗೆ ಆಳರಸ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನು 1917ರಲ್ಲಿ ಇಡುವುದಕ್ಕೆ ಮೊದಲು, ಕನ್ನಂಬಾಡಿ ಕಟ್ಟೆ ಎಂದೇ ಕರೆಯಲ್ಪಡುತ್ತಿದ್ದ ಇದು ವಿಶ್ವವಿಖ್ಯಾತ ಬೃಂದಾವನದಿAದಾಗಿ ಪ್ರಸಿದ್ಧವಾಗಿದೆ.ಇದು `ಪ್ರವಾಸಿಗರ ಸ್ವರ್ಗ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರವಾಸಿಗರ ಸ್ವರ್ಗವೆಂದೇ ಪ್ರಸಿದ್ಧವಾಗಿರುವ ಬೃಂದಾವನ ತೋಟವು ದೇವಲೋಕದ ನಂದನವನದAತಿದ್ದು, ಒಳಸಾಗುತ್ತಿದ್ದಂತೆ ಎದುರಾಗುವ ವಿವಿಧ ವಿನ್ಯಾಸದ ಕಾರಂಜಿಗಳ ಸಾಲು ಚಿಮ್ಮಿಸುವ ಜಲಧಾರೆ, ಸಿಂಪಡಿಸುವ ತುಂತುರು ಮೂಡಿಸುವ ಚಿತ್ತಾರ, ಸುತ್ತ ಸಸ್ಯಸಂಪದಗಳ ಅಲಂಕಾರ, ವಿದ್ಯುತ್ ಬೆಳಕಿನ ಶೃಂಗಾರದ ರಸದೌತಣವನ್ನು ಸವಿಯುತ್ತ ಮುನ್ನಡೆದು ನಡುವಿರುವ ವಿಶಾಲ ಸರೋವರವನ್ನು ಬೇಕೆನಿಸಿದರೆ ದೋಣಿವಿಹಾರದೊಂದಿಗೆ ದಾಟಬಹುದು. ಒಂದು ಕಾಲದಲ್ಲಿ ದಕ್ಷಿಣ ಭಾರತಕ್ಕೇ ಪ್ರಥಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಂಗೀತಕಾರAಜಿ (1985)ಯು, ಹೊರಹೊಮ್ಮುವ ಸಂಗೀತಕ್ಕೆ ತಕ್ಕಂತೆ ಜಿಗಿದು ನಲಿಯುವ ವರ್ಣರಂಜಿತ ವಿದ್ಯುತ್ ನೃತ್ಯ ಕಾರಂಜಿ ನೋಡುಗರಲ್ಲಿ ಉಲ್ಲಾಸವನ್ನುಂಟು ಮಾಡುತ್ತದೆ.