ರಂಗನತಿಟ್ಟು
ನಿರ್ದೇಶನತಾಲೂಕು ಕೇಂದ್ರ ಶ್ರೀರಂಗಪಟ್ಟಣದಿAದ ಮೂರು ಕಿ.ಮೀ. ಪಶ್ಚಿಮಕ್ಕೆ, ಪಶ್ಚಿಮವಾಹಿನಿಗೆ ಅನತಿ ದೂರದಲ್ಲಿ ಸುಮಾರು 0.67 ಚದುರ ಕಿ.ಮೀ. ವಿಸ್ತೀರ್ಣದ ನಾಲ್ಕಾರು ಕಿರುದ್ವೀಪಗಳನ್ನು ತನ್ನೊಡಲಲ್ಲಿ ನಿರ್ಮಿಸಿರುವ ಕಾವೇರಿಯು, ಇಲ್ಲಿ ಕವಲೊಡೆದು ನಾಲ್ಕು ರ‍್ಲಾಂಗ್ ದೂರ ಹರಿದು ಮತ್ತೆ ಒಂದಾಗುತ್ತದೆ.ಸುಣ್ಣದ ಕಲ್ಲಿನಿಂದೊಡಗೂಡಿದ ಈ ದ್ವೀಪಕ್ಕೆ ನಿರ್ದಿಷ್ಟ ಸಮಯದಲ್ಲಿ ದೇಶ-ವಿದೇಶಗಳಿಂದ ಬಂದು ಹೋಗುವ ವಿವಿಧ ಪಕ್ಷಿಗಳಿಂದಾಗಿ ಇದೊಂದು ಪ್ರಾಕೃತಿಕ ಪಕ್ಷಿಧಾಮವಾಗಿದೆ. ಪಕ್ಷಿಪ್ರೇಮಿ ಹಾಗೂ ಪಕ್ಷಿ ಶಾಸ್ತçಜ್ಞ ಸಲೀಂ ಅಲಿ ಅವರಿಂದಾಗಿ 1940ರ ಜೂನ್ ಒಂದರಿAದ ಇದನ್ನು `ರಾಷ್ಟಿçÃಯ ಪಕ್ಷಿಧಾಮ’ವೆಂದು ಘೋಷಿಸಿ ಸಂರಕ್ಷಿಸಲಾಗುತ್ತಿದೆ. ಇಲ್ಲಿಯ ಮಡುವಿನಲ್ಲಿ ಮೊಸಳೆಗಳೊಂದಿಗೆ ನೀರುನಾಯಿ; ಬಳಿ, ಕೂರಲು, ಮುಚ್ಯಾಲು, ಕೆಮ್ಮೀನು, ಬಾಳೆ, ಗೂಡ್ಲೆ, ಬಂಗಿಸಿದ್ದ, ಅವಲುಕುಚ್ಚು, ಕೊರವ, ಹಾವು, ಅರ್ಜಗೆಂಡ, ಮುಂತಾದ ಜಾತಿಯ ಮೀನುಗಳೂ ಇದ್ದು, ದೊಡ್ಡ ದ್ವೀಪದಲ್ಲಿ ಗಿಡಮರಗಳು ದಟ್ಟವಾಗಿರುವ ಎಡೆಯಲ್ಲಿ ನವಿಲು, ನರಿ, ಮೊಲ, ಕಾಡುದನ, ಜಿಂಕೆ, ಮುಂತಾದ ಪ್ರಾಣಿಗಳೂ ಇವೆ. ಪ್ರಕೃತಿ ನಿರ್ಮಿತ ಈ ದ್ವೀಪ ಸಮೂಹವು ಪಕ್ಷಿಗಳಿಗೆ ಪ್ರಾಕೃತಿಕ ರಕ್ಷಣೆ, ನೈಸರ್ಗಿಕ ಆಹಾರ ಲಭ್ಯತೆಯ ಅವಕಾಶಗಳನ್ನು ಕಲ್ಪಿಸಿದ್ದು, ಡಿಸೆಂಬರ್-ಜನವರಿಯಿAದ ಅಕ್ಟೋಬರ್ ವರೆಗೆ ಇಲ್ಲಿಗೆ ಬಂದು ಹೋಗುವ ವಿವಿಧ ಪ್ರದೇಶದ ಪಕ್ಷಿಗಳ ಹಿಂಡು ಕಣ್ಣಿಗೆ ಮುದ ನೀಡುತ್ತದೆ.